‘ಕಾರಂತ ಪ್ರಪಂಚ’ ತಾಣಕ್ಕೆ ಆತ್ಮೀಯ ಸ್ವಾಗತ


ಕೋಟ ಶಿವರಾಮ ಕಾರಂತ ಎಂದರೆ ಒಂದು ಶಿಸ್ತು, ಒಂದು ವ್ಯವಸ್ಥೆ, ಒಂದು ಸಂಘಟನೆ, ಒಂದು ಸಂಯೋಜನೆ. ಒಬ್ಬ ವ್ಯಕ್ತಿ ಜೀವನದಲ್ಲಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿ ಕಾರಂತರು. ಕಳೆದ ಶತಮಾನದ ಎರಡು ಧ್ರುವಗಳ ನಡುವೆ ಅವರೊಂದು ಪ್ರಾತಿನ…

Source: ‘ಕಾರಂತ ಪ್ರಪಂಚ’ ತಾಣಕ್ಕೆ ಆತ್ಮೀಯ ಸ್ವಾಗತ

Advertisements

ಎತ್ತ ಸಾಗುತ್ತಿದೆ ಕನ್ನಡ ಚಿತ್ರರಂಗ?


Ranna sairat premamಡಬ್ಬಿಂಗ್ ಬಂದರೆ ಚಿತ್ರರಂಗ ಮುಳುಗಿ ಹೋಗುತ್ತೆ. ಕಾರ್ಮಿಕರು ಬೀದಿ ಪಾಲಾಗ್ತಾರೆ ಅಂತ ಕನ್ನಡದ ದೊಡ್ಡ ನಟರೊಬ್ಬರು ಕಳದ್ ವರ್ಷ ಮೀಡಿಯಾ ಮುಂದೆ ಮೂರನೇ ಕಣ್ಣು ತೆಗಿಬೇಕಾಗತ್ತೆ ಅಂತ ಕಿರುಚಾಡಿದ್ದು ನೆನಪಿಗೆ ಬರ್ತಿದೆ. ಮೊನ್ನೆ ಚಕ್ರವ್ಯೂಹ ಸಿನಿಮಾ ನೋಡಕ್ಕೆ ಹೋಗಿದ್ದೆ. ಕೆಲ ನಟರನ್ನು ಹೊರತುಪಡಿಸಿದರೆ ಚಿತ್ರದ ನಿರ್ದೇಶಕನಿಂದ ಹಿಡಿದು ಲೈಟ್ ಬಾಯ್ ತನಕ ಎಲ್ರೂ ತಮಿಳ್ನವ್ರೆ. ಎಲ್ಲೋಯ್ತು ಸ್ವಾಮೀ ನಿಮ್ಮ ಕನ್ನಡದ ನಿಷ್ಠೆ. ದುರಂತ ಎಂದರೆ ಈ ಚಿತ್ರದ ನಾಯಕ ನಟ ನಮ್ಮ ಟಾಪ್ ೧ ಹೀರೋ. ಇಷ್ಟೇ ಅಲ್ಲ; ಕನ್ನಡ ಚಿತ್ರರಂಗದ ಪರಿಸ್ಥಿತಿ ನೋಡಿ ಒಂದು ರಂಗಿತರಂಗ ಮತ್ತೊಂದು ಉಳಿದವರು ಕಂಡಂತೆ ಹೀಗೆ ಮೂರು ಮತ್ತೊಂದು ಚಿತ್ರಗಳನ್ನ ಇಟ್ಕಂಡು ಅಯ್ಯೋ ಚಿತ್ರರಂಗದ ಸುವರ್ಣ ಯುಗ ಬಂದೆ ಬಿಡ್ತು. ನಾವು ಮುಂದೆ ಎಲ್ರೂ ನಮ್ ಹಿಂದೆ ಅಂತ ಪುಂಗಿ ಬಿಡೋದ್ರಲ್ಲೇ ಕಾಲ ಕಳಿತಿದೆ.

ಆದ್ರೆ ವಸ್ತು ಸ್ಥಿತಿ ಹೆಂಗಿದೆ? ಒಂದು ಯು ಟರ್ನ್, ಮತ್ತೊಂದು ತಿಥಿ ಮಗದೊಂದು ರಂಗಿತರಂಗ ಇಷ್ಟೇ ಸಾಕ? ವರ್ಷ ಓಡಿದ್ರು ಈ ಚಿತ್ರಗಳು ನಿಜಕ್ಕೂ ಗಳ್ಸಿದ್ ಎಷ್ಟು? ಉತ್ರ ಆಯ ಚಿತ್ರಗಳ ನಿರ್ಮಾಪಕರನ್ನೇ ಕೇಳಿ. ಇಷ್ಟು ದಿನ ತಮಿಳ್ ತೆಲುಗು ಸಿನೆಮಾಗಳು ಮಾತ್ರ ನಮಗಿಂತ ಮುಂದಿವೆ ಅಂತ ಅಂದ್ಕೊಂಡ್ರೆ, ಮೊನ್ನೆ ಮೊನ್ನೆ ಬಿಡುಗಡೆ ಆದ ಮಲಯಾಳಮ್ ಚಿತ್ರ ಪ್ರೇಮಮ್ ಗಳ್ಸಿದ್ದು ಬರೋಬ್ಬರಿ ೭೦ ಕೋಟಿ. ಇನ್ನು ಬಾಲಿವುಡ್ ಹೊಡತಕ್ಕೆ ಸಿಖಾಕ್ಕೊಂಡ್ ಇನ್ನೇನ್ ಮುಳ್ಗೆ ಬಿಡ್ತು ಅಂತಿದ್ದ ಮರಾಠಿ ಚಿತ್ರರಂಗ ಸೈರಾಟ್ ನಂತಹ ಚಿತ್ರ ಕೊಟ್ಟು ಪುಟಿದೆದ್ದು ನಿಂತಿದೆ. ಅಂದ ಹಾಗೆ ೪ ಕೋಟಿ ಬಜೆಟ್ಟಿನ ಈ ಚಿತ್ರ ಗಳ್ಸಿದ್ದು ೭೦+ ಕೋಟಿ. ತೆಲುಗು ಚಿತ್ರ ಬಾಹುಬಲಿ ಕರ್ನಾಟಕದಲ್ಲಿ ರಿಲೀಸ್ ಆಗಿ ೪೦ ಕೋಟಿ ಬಾಚ್ಕೊಂಡು ಹೋಯ್ತು. ವಿಷ್ಯ ಏನಪ್ಪಾ ಅಂದ್ರೆ ಇದುವರೆಗೂ ಕನ್ನಡದ ಯಾವ ಚಿತ್ರಾನು ಇಷ್ಟೊಂದ್ ಹಣ ಗಳಿಕೆ ಮಾಡಿದ್ದು ಇತಿಹಾಸದಲ್ಲೇ ಇಲ್ಲ. ಎತ್ತ ಸಾಗುತ್ತಿದೆ ನಮ್ಮ ಚಿತ್ರರಂಗ? ಸೊ ಕಾಲ್ಡ್ ನಮ್ಮ ಸ್ಟಾರ್ ನಟರು ನಾನ್ ಬರೋವ್ಬರ್ಗು ಮಾತ್ರ ಬೇರೆಯವ್ರ ಹವಾ ಬಂದಮೇಲೆ ನಂದೇ ಅಂತ ಡೈಲಾಗ್ ಹೊಡ್ಕೊಂಡು ಉತ್ತರನ ಪೌರುಷ ಮಾತ್ರ ತೋರ್ಸ್ತವ್ರೆ. ಬಟ್ ಇವ್ರು ಮಾಡ್ತಿರೋದೇನು? ಮಾಸ್ಟರ್ಪೀಸ್, ರಥಾವರ, ಐರಾವತ, ರಣವಿಕ್ರಮ ದಂತಹ ಅತಿ ಕೆಟ್ಟ ಸಿನೆಮಾಗಳು, ಮಾಣಿಕ್ಯ, ರನ್ನ ದಂತಹ ಹಳಸಲು ಚಿತ್ರಗಳು. ಇನ್ನೆಲ್ಲಿಯ ಕ್ರಿಯೇಟಿವಿಟಿ? ನೇಟಿವಿಟಿ? ಬೇಲಿಯೇ ಎದ್ದು ಹೊಲ ಮೆಯ್ದಹಂಗೆ ಆಗಿದೆ ಚಿತ್ರರಂಗದ ಪರಿಸ್ಥಿತಿ.

ಹಂಗಾದ್ರೆ ಇದಕ್ಕೆಲ್ಲ ಪರಿಹಾರನೆ ಇಲ್ವಾ? ಇದೆ. ನಮ್ಮಲ್ಲಿರೋ ಮೂರು ಮತ್ತೊಂದು ಸ್ಟಾರ್ ನಟರು ಸುಮ್ನೆ ಗಾಂಧಿ ಕ್ಲಾಸ್ ಆಡಿಯನ್ಸ್ ಗೆ ಹಿಡ್ಸೊ ಅಂತ ತಲೆ ಬುಡ ಇಲ್ದಿರೋ ಡೈಲಾಗ್ ಬರ್ಸೋದು, ಸ್ಕ್ರಿಪ್ಟ್ ಒಳಗೆ ಮೂಗ್ ತೋರ್ಸೋದನ್ನ ನಿಲ್ಸ್ಬೇಕು. ಇನ್ನು ರಿಮೇಕ್ ಇದು ಚಿತ್ರರಂಗಕ್ಕೆ ಬಡ್ದಿರೋ ಕ್ಯಾನ್ಸರ್. ಉಪೇಂದ್ರ ಅಂತ ಸೃಜನಶೀಲ ನಿರ್ದೇಶಕ ಬ್ಯಾಕ್ ಟು ಬ್ಯಾಕ್ ಎರಡ್ಮೂರು ರಿಮೇಕ್ ಚಿತ್ರಗಳಲ್ಲಿ ನಟ್ಸೋದು ನೋಡಿದ್ರೆ ರಕ್ತ ಕುದ್ಯತ್ತೆ. ರನ್ನ, ಪವರ್ ನಂತಹ ಅತಿ ಕೆಟ್ಟ ರಿಮೇಕ್ ಇಲ್ಲಿ ಉಲ್ಲೇಖನೀಯ. ಅಂದಹಾಗೆ ಎಲ್ರು ಹೇಳೊ ಹಂಗೆ ನಮ್ಮ ಚಿತ್ರರಂಗಕ್ಕೆ ಹೊಡೆತ ಕೊಡ್ತಿರೋದೆ ಪರಭಾಷಾ ಚಿತ್ರಗಳು. ಅಲ್ಲ ಸ್ವಾಮೀ ಈ ಚಿತ್ರಗಳನ್ನ ಕರ್ನಾಟಕದಲ್ಲಿ ವಿತರಣೆ ಮಾಡ್ತಿರೋದ್ ಯಾರು? ಮುಂದಿನ ತಿಂಗಳಲ್ಲಿ ಬರ್ತಿರೋ ಕಬಾಲಿ ಚಿತ್ರದ ವಿತರಣೆ ಈಗಾಗ್ಲೇ ರಾಕ್ ಲೈನ್ ಸರ್ ೨೦ ಕೋಟಿಗೆ ತಗೊಂಡವ್ರೆ ಅಂತೆ. ಬಾಹುಬಲಿ ಚಿತ್ರದ ವಿತರಕ ಇನ್ನೊಬ್ಬ ಕನ್ನಡದ ಕಟ್ಟಾಳು ಕನಕಪುರ ಶ್ರೀನಿವಾಸ್. ದುಶ್ಮನ್ ಕಹಾ ಹಾಯ್ ಅಂದ್ರೆ ಬಗಲ್ ಮೇ ಅನ್ಧಂಗ್ ಆಗಿದೆ ಚಿತ್ರರಂಗದ ಪರಿಸ್ಥಿತಿ. ಕನ್ನಡದ ಒಬ್ಬ ಸ್ಟಾರ್ ನಟನ ಸಿನೆಮಾ ಟ್ರೈಲರ್ ಲಕ್ಷ ವೀವ್ಸ್ ಆದ್ರೆ ಅದೇ ದೊಡ್ ಸಾದನೆ ಅನ್ನೋದನ್ನ ಬಿಟ್ಟು, ಜಗತ್ತು ಹೆಂಗ್ ನಡಿತಿದೆ ಅಂತ ಒಮ್ಮೆ ಆತ್ಮ ವಿಮರ್ಶೆ ಮಾಡ್ಕೊಳೋಕೆ ಇದು ಸಕಾಲ. ಇಲ್ಲಾಂದ್ರೆ ಇನ್ನೊಂದೈದು ವರ್ಷದಲ್ಲಿ ಚಿತ್ರರಂಗ ಚರಿತ್ರೆಯ ಪುಟ ಸೇರೋದ್ರಲ್ಲಿ ಸಂಶಯಾನೆ ಇಲ್ಲ. ಇದು ಬರೀ ವ್ಯಂಗ್ಯ ಅಲ್ಲ ಪ್ರತಿಯೊಬ್ಬ ಹತಾಶ ಕನ್ನಡ ಸಿನಿ ಪ್ರೇಕ್ಷಕರ ಮಾತು.

ಇಷ್ಟಕಾಮ್ಯ – ದೊಡ್ಡೇರಿ ವೆಂಕಟಗಿರಿರಾವ್


Ishtakamyaಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಚಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು. ಎರಡು ಧ್ರುವಗಳು. ದೊಡ್ಡೇರಿ ವೆಂಕಟಗಿರಿರಾವ್ರ ಕಾದಂಬರಿ ಈ ವಿಚಿತ್ರ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೆ ಹಚ್ಚುವ ಜೊತೆಗೆ ಬೇರೊಂದು ಭಾವನಾ ಲೋಕಕ್ಕೆ ಕರೆದೊಯ್ಯುವ ಮನೋಜ್ಞ ಕಾದಂಬರಿ ‘ಇಷ್ಟಕಾಮ್ಯ‘. 

ಹೇಳಲೇನು ಕಾರಣ? ರವಿ’ದಾದಾ’


12063859_1014488255268667_4014216630599290069_nಅಪರೂಪಕ್ಕೊಮ್ಮೆ ರವಿ ಬೆಳಗೆರೆ ಯವರ ಬ್ಲಾಗ್ ಗೆ ಹೋಗಿ ಇಣುಕಿ ನೋಡೋದು ನನ್ನ ಅಭ್ಯಾಸ. ಅದು ತಿಂಗಳೊ ಎರಡು ತಿಂಗಳಿಗೋ ಒಮ್ಮೆ. ಇವತ್ತು ಅವ್ರ ಬ್ಲಾಗ್ ನಲ್ಲಿ ‘ಅಕ್ಕರೆಯಿಂದ ಕರೆಯುವವಳ ಮನೆಗೆ ಹೋಗುವ ತವಕ” ಎಂಬ ಒಕ್ಕಣೆಯಿರುವ ಲೇಖನ ಒದ್ದ್ದೆ. ತುಂಬಾ ಎಮೋಷನಲ್ ಆಗಿ ಬೆಳಗೆರೆ ಯವರು ಈ ಲೇಖನ ಬರ್ದಿದಾರೆ. ಎಸ್ಸ್.. ಅವ್ರ ಲೇಖನಗಳಲ್ಲಿರೋ ಆ ಮ್ಯಾಜಿಕ್ ಇನ್ನೂ ಮಾಸಿಲ್ಲ ಮಾಸೋದು ಇಲ್ಲ. ಆದರೆ ಜೀವನದಲ್ಲಿ ಮಾಗಿದ ಬೆಳಗೆರೆ ಯವರ ಇನ್ನೊಂದು ಮುಖವನ್ನು ಕಾಣಬಹುದು. ನಾನು ನನ್ನದು ನನ್ನಿಂದಲೇ ಎನ್ನುವ ಬೆಳಗೆರೆ ಯವರ ದಾರ್ಷ್ಟ್ಯ ಪದಗಳು ಇಲ್ಲಿಲ್ಲ. “ನನಗಾದರೂ ಇನ್ನೆಷ್ಟಿವೆ ಬದುಕ ಬೇಕಾದ ದಿನಗಳು? ಅಲ್ವೆ?” ಅನ್ನುವ ಸಾಲುಗಳು ನಿಜಕ್ಕೂ ನನ್ನ ಕಣ್ಣಂಚಲ್ಲಿ ಹನಿಗಳನ್ನು ಮೂಡಿಸಿದವು. ಅದ್ಯಾಕೋ ಏನೋ ನನ್ನ ಬಾಲ್ಯದ ದಿನಗಳನ್ನು ನೆನಪಿಸಿದವು.

ನಿಜ ಹೇಳ್ಬೇಕಂದ್ರೆ ನನ್ಗೆ ಓದಿನ ಗೀಳನ್ನು ಪರೋಕ್ಷವಾಗಿ ಹಚ್ಚಿದವರೆ ಬೆಳಗೆರೆಯವರು. ಅವರ ಹಿಮಾಲಯನ್ ಬ್ಲಂಡರ್ ಪುಸ್ತಕ ಓದಿ ನಾನೀಗ್ಲೆ ಕಾಶ್ಮೀರ ಕ್ಕೆ ಹೋಗ್ತೀನಿ ಯುದ್ಧ ಮಾಡಕ್ಕೆ ಅಂತ ೨೦೦೨ ರಲ್ಲಿ ತಾಯಿ ಜೊತೆ ಜಗ್ಳ ಆಡಿದ ನೆನಪು ಬರ್ತಾ ಇದೆ. ಹೌದು ಅದು ನಾನು ಓದಿದ ಮೊದಲ ಕನ್ನಡ ಪುಸ್ತಕ ೬ ನೆ ಕ್ಲಾಸ್ ನಲ್ಲಿ ಇದ್ದೆ ಅನ್ಸತ್ತೆ. ಅಲ್ಲಿಂದ ಶುರು ಆಯ್ತು ನೋಡಿ ಪುಸ್ತಕ ಓದೋ ಹುಚ್ಚು. ಕನ್ನಡ ಅಂದ್ರೆ ನನ್ನ ತಲೆ ನಲ್ಲಿ ಬರ್ತಿದ್ದಿದ್ದೆ ಬೆಳಗೆರೆ ಅವ್ರ ಬುಕ್ಸ್. ಸಕತ್ ಅಡಿಕ್ಟಿವ್ ಕಣ್ರಿ ಅವ್ರ ಬರವಣಿಗೆ. ಗಾಂಧೀ ಹತ್ಯೆ ಮತ್ತು ಗೋಡ್ಸೆ, ಡಿ ಕಂಪೆನಿ, ನೀನಾ ಪಾಕಿಸ್ತಾನ, ಪಾಪಿಗಳ ಲೋಕದಲ್ಲಿ, ಹೇಳಿ ಹೋಗು ಕಾರಣ ಹೀಗೆ ಒಂದಾ ಎರಡ ಇಲ್ಲಿ ತನಕ ಅವ್ರು ೭೦ ಕ್ಕೂ ಹೆಚ್ಚು ಪುಸ್ತಕಗಳನ್ನ ಬರ್ದಿದಾರೆ. ಅದ್ರಲ್ಲಿ ಸುಮಾರು ೩೦ ಕ್ಕೂ ಹೆಚ್ಚು ೨೦೦೮ ರಲ್ಲೇ ಓದಿ ಮುಗ್ಸಿದ್ದೆ. ನನ್ನ ಸ್ಕೂಲ್ ಡೇಸ್ ನಲ್ಲಿ ನನ್ನ ಬೆಸ್ಟ್ ಫ್ರೆಂಡ್ಸ್ ಅಂದ್ರೆ ಬೆಳಗೆರೆ ಯವರ ಬುಕ್ಸ್ ಆಗಿತ್ತು. ಇನ್ನೇನು ಬುಕ್ಸ್ ಓದಿ ಮಡ್ಚಿ ನಿದ್ದೆ ಮಾಡ್ಬೇಕು ಅನ್ನೋಷ್ಟ್ರಲ್ಲಿ ಬರ್ತಿತ್ತು ನೋಡಿ ‘ಕ್ರೈಂ ಡೈರಿ’ ಆ ಕಂಚಿನ ಕಂಠ ಕೇಳೋವಾಗ್ಲೆ ನಡುಗೋ ಚಳೀಲು ಬೆವರು ಕಿತ್ಕೊಂಡು ಬರ್ತಿತ್ತು. ಸ್ಕೂಲ್ ನಲ್ಲಿ ಅವ್ರ ಮಿಮಿಕ್ರಿ ಮಾಡೋದ್ರಲ್ಲಿ ನಾನಂತೂ ವರ್ಲ್ಡ್ ಫೇಮಸ್ಸು. ಅಷ್ಟೇ ಅಲ್ಲ ಆಮೇಲೆ ಶುರುವಾಯ್ತು ನೋಡಿ ಎಂದೂ ಮರೆಯದ ಹಾಡು. ಅವರ ಆ ಹಾಸ್ಯಭರಿತ ನಿರೂಪಣೆ, ಕವಿ ಪರಿಚಯ, ಕನ್ನಡ ಭಾಷೆಯ ವಿಸ್ತಾರ ಆಳ ಅಗಲಗಳ ಪರಿಚಯ ಮಾಡಿಕೊಡೋ ರೀತಿ ನನ್ಗೆ ಇನ್ನಷ್ಟು ಭಾಷಾಭಿಮಾನ ಮೂಡೋ ಹಾಗೆ ಮಾಡ್ತು ಅನ್ನೋದ್ರಲ್ಲಿ ದೂಸ್ರ ಮಾತೆ ಇಲ್ಲ. ಹೀಗೆ ನನ್ನ ಸ್ಕೂಲ್ ಡೇಸ್, ಆರಂಬಿಕ ಕಾಲೇಜ್ ದಿನಗಳೆಲ್ಲ ಬೆಳಗೆರೆ ಯವರ ಪುಸ್ತಕಗಳ ಜೊತೆಗೆ, ಅವರು ನಡೆಸಿ ಕೊಡುತ್ತಿದ್ದ ಕಾರ್ಯಕ್ರಮಗಳ ಜೊತೆಗೆ ಕಳ್ದೆ ಅಂದ್ರೆ ತಪ್ಪಿಲ್ಲ.

ಅದ್ಯಾಕೋ ಇತ್ತೀಚಿಗೆ ನಾನು ಬೆಳಗೆರೆ ಯವರ ಲೇಖನಗಳನ್ನು ಅಷ್ಟೊಂದು ಫಾಲೋ ಮಾಡ್ತಿರಲಿಲ್ಲ. ಅದ್ಕೆ ಅವ್ರ ಪುಸ್ತಕಗಳು ಕಡ್ಮೆ ಆಗಿದ್ದೋ ಅಥವ ನನ್ನ ಬೋರಿಂಗ್ ಐ ಟಿ ಲೈಫೋ ಕಾರಣ ಇರ್ಬೌದು, ಬಟ್ ಸ್ಕೂಲ್ ಡೇಸ್ ನಲ್ಲಿ ಅವ್ರ ಕಾದಂಬರಿ ಗಳಲ್ಲಿ ಓದಿದ ಒಂದೊಂದು ಸಾಲುಗಳು ನನ್ಗೆ ಈವಾಗ್ಲು ನೆನಪಿದೆ. ‘ಐ ರಿಯಲಿ ಮಿಸ್ ರವಿ ಬೆಳಗೆರೆ’. ‘ಇಲ್ಲಿ ತನಕ ನಾನು ಹೊಸ ಮನೆಯನ್ನು ಪೂರ್ತಿ ನೋಡಿಲ್ಲ. ನೋಡೋ ಹೊತ್ತಿಗೆ ಸುಸ್ತಾಗುತ್ತದೆ” ಅನ್ನೋವಾಗ ಎಲ್ಲೋ ರವಿ ಯವರ ಆರೋಗ್ಯದ ಯೋಚನೆ ಹತ್ತುತ್ತೆ ಬಟ್ ಅವ್ರ ಪುಸ್ತಕಗಳನ್ನು ನೆನ್ಸ್ಕೊಂಡಾಗ ಅದ್ರಲ್ಲಿರೋ ಅಗಾಧ ಜೀವನೋತ್ಸಾಹ, ಬದುಕನ್ನು ವಿಭಿನ್ನವಾಗಿ ಕಂಡ ಪರಿ ನನ್ಗೆ ಮತ್ತೊಮ್ಮೆ ಅವರ ಎಲ್ಲಾ ಬರವಣಿಗೆಗಳನ್ನು ತಿರುವಿ ಹಾಕ್ಬೇಕು ಅಂತ ಅನ್ಸ್ತಾ ಇದೆ. ಈಗಷ್ಟೇ ಹೇಳಿ ಹೋಗು ಕಾರಣ ಕಾದಂಬರಿ ತೆಗ್ದಿಟ್ಕೊಂಡಿನಿ. ಸೊ ಇವತ್ತು ರಾತ್ರೆ ನಿದ್ದೆ ಗೆ ಗುದ್ದು.
ಸಾಯುವುದರ ಬಗ್ಗೆ ನನಗೆ ತಕರಾರಿಲ್ಲ‘ ಅನ್ನೋವಾಗ ಯೋಚಿಸಿ ಸಾರ್. ನಿಮಗೆಷ್ಟು ಇವಾಗ ವಯಸ್ಸು ಜಸ್ಟ್ ೫೪. ನೀವೇ ಮೊದ್ಲು ಹೇಳ್ತಾ ಇದ್ಹಂಗೆ ಇನ್ನು ೪೬ ವರ್ಷ ಇದೆ.  ಗುರೂಜಿ… ನೂರು ಕಾಲ ಅಕ್ಷರ ಮಾಂತ್ರಿಕನಾಗಿ ಇರಿ.

ನಮ್ಮನೇಲಿ ನಾವೇ ಅನಾಥರು!


ಇಲೆಕ್ಟ್ರಾನಿಕ್ ಸಿಟಿ ಸುತ್ತ ಮುತ್ತ ಕೆಲ್ಸ ಮಾಡೋರ ಹಣೆಬರಹ ಕೇಳ್ಬೇಡಿ. ಅದರಲ್ಲೂ ಕನ್ನಡಿಗರ ಪಾಡು ನಾಯಿ ಪಾಡು. ಆಫೀಸ್ ಕ್ಯಾಂಟೀನ್ ಊಟ ಬಾಯಿಗ್ ಹಾಕಕ್ ಆಗಲ್ಲ ಅಂತ ಹೊರಗಡೆ ಹೋಗಿ ತಿನ್ನಾಣ ಅಂದ್ರೆ ಆಂಧ್ರ ಮೀಲ್ಸ್, ಕೇರಳ ತನಿಮ, ಪಂಜಾಬಿ ಧಾಬ, ಹೈದರಾಬಾದ್ ಬಿರಿಯಾನಿ ಹೌಸ್, ಲಡ್ಡುವಾಲ ಮಣ್ಣು ಮಸಿ ಇದು ಬಿಟ್ಟೂ ನೆಟ್ಗೆ ಒಂದೇ ಒಂದು ನಮ್ಮೂರಿದ್ ಉಪಹಾರ ಮನೆಗಳು ಐ ಮೀನ್ ಹೋಟೆಲ್ ಗಳು ಇಲ್ಲ.

ಏನ್ ಮಾಡಣ ಹೊಟ್ಟೆ ತುಂಬಿಸ್ಕೋ ಬೇಕಲ್ವ ಅಂತ ಮೊನ್ನೆ ಕೇರಳ ತನಿಮ ರೆಸ್ಟೋರೆಂಟ್ ಗೆ ಹೋದೆ. ಬಂದ ಆಸಾಮಿ! ಅಲ್ಲಿ ಅವ್ನೆ ವೈಟರ್ ಅವ್ನೆ ಕ್ಯಾಷಿಯರ್. ಏನಿದೆ ಸಾರ್! ಅಂತ ಕೇಳ್ದೆ. ಮೀಲ್ಸ್, ಫಿಶ್ ಕರ್ರಿ ಅದು ಇದು ಹೇಳ್ದ. ನಾನ್ ಬರಿ ಮೀಲ್ಸ್ ಸಾಕು ಬೇರೆ ಏನು ಬೇಡ ಅಂದೇ. ಮುಖ ಇಷ್ಟ್ ದಪ್ಪ ಮಾಡ್ಕೊಂಡು ಒಂದ್ ಪ್ಲೇಟ್ ಮೀಲ್ಸ್ ತಂದು ಟೇಬಲ್ ಮೇಲೆ ಕುಕ್ದ. ಊಟ ಮಾಡ್ದೆ. ಬಿಲ್ ಕೊಡಕೆ ಹೋಗ್ಬೇಕು ೬೦ ರುಪಾಯೀ ಅಂದ. ನಾನ್ ೧೦೦ ರೂಪಾಯಿ ನೋಟ್ ಕೊಟ್ಟೆ. ಸಹಜವಾಗೇ ಚೇಂಜ್ ಕೊಡಿ ಅಂದ, ನಾನು ಇಲ್ಲ ಅಂದೇ. ಒಂದ್ ಪ್ಲೇಟ್ ಮೀಲ್ಸ್ ಗೆಲ್ಲ ಚೇಂಜ್ ಕೊಡಕ್ಕಾಗಲ್ಲ ಅಂದ್ಬಿಟ್ಟ. ಏನ್ರೀ ಕಸ್ಟಮರ್ಸ್ ಹತ್ರ ಇಷ್ಟೊಂದು ರೂಡ್ ಆಗ್ ಮಾತಾಡ್ತಿರ ಅಂದಿದ್ದಕ್ಕೆ, ನೇರವಾಗಿ ಇಷ್ಟ ಇದ್ರೆ ಬನ್ನಿ ಇಲ್ಲ ಅಂದ್ರೆ ಚೇಂಜ್ ಕೊಟ್ ಹೋಗಿ ಅನ್ಬೇಕ! ಅಷ್ಟೇ ಅಲ್ದೆ ಪಕ್ದಲ್ಲಿ ನಿಂತಿದ್ದ ಅವನ್ ಚೇಲ ಹತ್ರ ಮಲಯಾಳೀ ಭಾಷೆಲಿ ಈ ಕನ್ನಡ ದವರು ಕೇರಳ ರೆಸ್ಟೋರೆಂಟ್ ಗೆ ಯಾಕ್ ಬರ್ತಾರೋ ಬಂದಾಗೆಲ್ಲ ಜಗಳ ಮಾಡ್ತಾರೆ ಅಂತ ಎಕ್ಷ್ತ್ರಾಫಿಟ್ಟಿಂಗ್ ಬೇರೆ. ರೇಗೊಯ್ತು ಏನ್ರೀ ಸ್ವಲ್ಪ ಮರ್ಯಾದಿ ಕೊಟ್ ಮಾತಾಡಿ ನಮ್ ಊರಿಗ್ ಬಂದು ನಮಗೆ ಬಯ್ತೀರಾ ಅಂದಿದ್ದಕ್ಕೆ. ನೀನ್ ಇರೋದು ನನ್ ಹೋಟೆಲ್ನಲ್ಲಿ ಚೇಂಜ್ ಕೊಟ್ ಹೋಗಯ್ಯಾ(ಬೀಪ್ ಬೀಪ್). ಏನ್ಮಾಡಣ  ೧೦೦ ರುಪಾಯಿ ಅವ್ನ ಮುಖಕ್ ಬಿಸಾಕ್ ಬಂದೆ.

ಇವ್ರ್ಗೆಲ್ಲ ಯಾರು ಹೇಳೋರು ಕೇಳೋರು ಇಲ್ವಾ? ಎಲ್ಲಾ ರೀತೀಲೂ ಕನ್ನಡದ ಮೇಲೆ ಕನ್ನಡ ಜನರ ಮೇಲೆ ವಲಸಿಗರು ದಬ್ಬಾಳಿಕೆ ನಡ್ಸಿ ಆಯ್ತು. ಒಂದ್ ಹೊತ್ತು ಊಟಾನೂ ನಮ್ಮೂರ್ನಲ್ಲಿ ನಮಗೆ ನೆಟ್ಟಗ್ ಮಾಡಕ್ ಆಗ್ತಿಲ್ಲ. ಯಾಕಿಷ್ಟೊಂದು ಒತ್ತಾಯದ ಹೇರಿಕೆ. ಎಲ್ರೂ ಒಂದೇ ತರ ಇರ್ತಾರೆ ಅಂತಲ್ಲ. ಇದೊಂದು ಉದಾಹರಣೆ ಅಷ್ಟೇ ಬೆಂಗಳೂರಿನಲ್ಲಿರೋ ಪ್ರತಿಯೊಬ್ಬ ಕನ್ನಡಿಗನೂ ಒಂದಲ್ಲ ಒಂದು ರೀತಿಯಲ್ಲಿ ಈ ರೀತಿ ಅವಮಾನಕ್ಕೆ ಒಳಗಾಗಿರೋದಂತು ಸತ್ಯ. ಒಂದಾ ಎರಡ ಬರ್ದ್ರೆ ಕೈ ನೋವು ಬರತ್ತೆ ಹೊರತು ಇದಿಕ್ಕೆಲ್ಲ ತಡೆ ಬರೋದು ಅಸಾದ್ಯ ಅನ್ಸತ್ತೆ. ಅದ್ಯಾವಾಗ್ ನಮ್ಮನ್ನಾಳೊ ಜನ ಈ ಬಗ್ಗೆ ಎಚ್ಚರಗೊಳ್ತಾರೋ? ನಮ್ಮೂರ್ನಲ್ಲೇ ನಾವು ಪರಕೀಯರಾಗಿರೋ ಈ ಟೈಮ್ ನಲ್ಲಿ ಯಾರನ್ನ ದೂರೋಣ? ವ್ಯವಸ್ಥೆಯ ಲೋಪವನ್ನೋ, ನಮ್ಮವರ ಅಸಡ್ಡೆಯನ್ನೊ